ಹರಿವೆ ಸೂಪ್ಪಿನ ಹುಳಿ ಸೊಪ್ಪು /Harive soppina Huli Soppu /Green leaves gravy recipe
Description :
ಹರಿವೆ ಸೂಪ್ಪಿನ ಹುಳಿ ಸೊಪ್ಪು /Harive soppina Huli Soppu /Green leaves gravy recipe
ಹರಿವೆ ಸೊಪ್ಪು-1
ತೊಗರಿ ಬೇಳೆ – 1 ಕಪ್
ಅರಿಶಿನ -1/2 ಚಮಚ
ಕೊತ್ತಂಬರಿ ಬೀಜ-1 ಚಮಚ
ಜೀರಿಗೆ-1 1/2 ಚಮಚ
ಬ್ಯಾಡಗಿ ಮೆಣಸಿನಕಾಯಿ-10
ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು
ತುಪ್ಪ
ಸಾಸಿವೆ-1 ಚಮಚ
ಇಂಗು- 1/4 ಚಮಚ
ಉಪ್ಪು
ಹರಿವೆಸೊಪ್ಪನ್ನು ಬಿಡಿಸಿ ತೊಳೆದು ಸಣ್ಣಗೆ ಕತ್ತರಿಸಿ.
ಒಂದು ಕಪ್ ತೊಗರಿಬೇಳೆಗೆ 3 ಕಪ್ ನೀರಾಕಿ ನೆನೆಸಿಡಿ.
ಕುಕ್ಕರ್ನಲ್ಲಿ ತೊಗರಿಬೇಳೆ, ನೀರು, ಅರಿಸಿನ, ಜೀರಿಗೆ, ಕೊತ್ತಂಬರಿ ಬೀಜ, ಉಪ್ಪು, ಹುಣಸೆಹಣ್ಣು, ಬ್ಯಾಡಿಗೆಮೆಣಸಿನಕಾಯಿ, ಹರಿವೆಸೊಪ್ಪು ಹಾಕಿ 2 ವಿಷಲ್ ಬಂದ ನಂತರ ಕುಕ್ಕರ್ ಆರುವುದಕ್ಕೆ ಬಿಡಿ.
ನೀರನ್ನು ಬಸಿದು ಮಿಕ್ಸೆರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು.
ಬಾಂಡಲಿ ಬಿಸಿಮಾಡಿ, ತುಪ್ಪ ಹಾಕಿ. ತುಪ್ಪ ಕಾದ ಮೇಲೆ, ಸಾಸಿವೆ ಕಾಜಿ, ಸಿಡಿಯುವದಕ್ಕೆ ಬಿಡಿ. ಇದಕ್ಕೆ ಇಂಗು ಹಾಕಿ ಮೇಲೆ ರುಬ್ಬಿದ ಮಿಶ್ರಣಕ್ಕೆ ಹಾಕಿ.
ರುಚಿಯಾದ, ಸತ್ವಭರಿತ ಹರಿವೆಸೊಪ್ಪಿನ ಹುಳಿಸೊಪ್ಪು ತಯಾರಿಗಿದೆ.
ಹರಿವೆಸೊಪ್ಪಿನ ಹುಳಿಸೊಪ್ಪು ಅನ್ನದ ಜೊತೆ ಮತ್ತು ರಾಗಿ ಮುದ್ದೆ ಜೊತೆ ಸವಿಯಬಹುದು.
ಹುರಳಿಕಾಳಿನ ಹಪ್ಪಳ ಹರಿವೆಸೊಪ್ಪಿನ ಹುಳಿಸೊಪ್ಪಿನ ಊಟಕ್ಕೆ ಮತ್ತಷ್ಟು ರುಚಿ ಕೊಡುತ್ತೆ.
ನೀವು ಇದನ್ನ ಮಾಡಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ವಂದನೆಗಳು..
#SastrysKitchen
Date Published | 2021-04-30 02:44:41 |
Likes | 8 |
Views | 302 |
Duration | 4:17 |