wheat flour lamp ಹೂವಿನ ಆಕೃತಿಯ ದೀಪ ಗೋಧಿ ಹಿಟ್ಟಿನಿಂದ ಮಾಡಿರುವ ದೀಪ.

wheat flour lamp ಹೂವಿನ ಆಕೃತಿಯ ದೀಪ ಗೋಧಿ ಹಿಟ್ಟಿನಿಂದ ಮಾಡಿರುವ ದೀಪ.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ದೀಪಾವಳಿ ಹಬ್ಬದ ಶುಭಾಶಯಗಳು, ನಾನು ಈ ದಿನ ಗೋಧಿಹಿಟ್ಟಿನಿಂದ ಹೂವಿನ ಆಕಾರದಲ್ಲಿ ದೀಪವನ್ನು ಮಾಡಿದ್ದೇನೆ ,ತುಂಬಾ ಸುಲಭವಾಗಿ ಮಾಡಬಹುದು ನೀವು ಕೂಡ ಒಮ್ಮೆ ಮಾಡಿ ನೋಡಿ ನಿಮಗೆ ಇಷ್ಟವಾದಲ್ಲಿ ನಮಗೊಂದು ಲೈಕ್ ಕೊಡುವುದನ್ನು ಮರೆಯಬೇಡಿ, ನಿಮ್ಮ ಪ್ರೋತ್ಸಾಹ ನಮಗೆ ಸದಾ ಇರಲಿ, ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು.

ಬೆಳಕಿನ ಕೊಡುಗೆ
************
ಜೇಡಿಮಣ್ಣನ್ನು ತಂದು ಹದಮಾಡಿ
ದೀಪದ ಆಕೃತಿ ಕೊಟ್ಟು ಬೇಯಿಸಿ
ನಮ್ಮ ಕೈಗಿಟ್ಟ ಕೊಡುಗೆ ಕುಂಬಾರನ ದು.

ಎಣ್ಣೆ ಕಾಳುಗಳನ್ನು ಬೆಳೆದು
ದೀಪಕ್ಕೆ ಬೇಕಾದ ಎಣ್ಣೆ ಕೊಟ್ಟ
ಕೊಡುಗೆ ರೈತನ ದು

ತನ್ನನ್ನು ತಾನೇ ಸುಟ್ಟು
ನಮಗೆ ಬೆಳಕ ಕೊಡೋ ಕೊಡುಗೆ ಹತ್ತಿಯದು

ಮದ್ದನ್ನು ಸೇರಿಸಿರುವ
ಬೆಂಕಿಕಡ್ಡಿಯಿಂದ
ದೀಪ ಹಚ್ಚುವ ಕೆಲಸ ಮಾತ್ರ ನಮ್ಮದು

ಇವರೆಲ್ಲರ ಪ್ರತಿಫಲದಿಂದ ನಮಗೆ ಸಿಕ್ಕ ಕೊಡುಗೆ ಈ ಬೆಳಕು
ಮನೆಯ ಕತ್ತಲೆಯ ದೂರಮಾಡಲು
ಬೇಕು ಈ ಹಣತೆಯ ಬೆಳಕು

ಮನದ ಕತ್ತಲೆಯ ದೂರಮಾಡಲು
ಪ್ರೀತಿ ಸ್ನೇಹ ಸಹಬಾಳ್ವೆಯ
ಹಣತೆ ಹಚ್ಚಬೇಕು

ನಾವು ಹಚ್ಚುವ ಹಣತೆಯ ಬೆಳಕು
ಮನೆ-ಮನದ ಕತ್ತಲ ಬೆಳಗುವ ಹಾಗಿರಬೇಕು
ಧರೆಯ ಸುಡುವಂತೆ ಅಲ್ಲ.
ರಾಣಿ ವೀರಪ್ಪ
—————


Rated 4.89

Date Published 2019-10-25 08:30:32Z
Likes 37
Views 813
Duration 0:10:24

Leave a Reply

Your email address will not be published. Required fields are marked *

Don't Miss! random posts ..