ಹೋಳಿ ಹಬ್ಬಕ್ಕೆ ಮನೆಯಲ್ಲಿ ತಯಾರಿಸಿದ ಬಣ್ಣಗಳು/Homemade Holi Colours.
Description :
Homemade Holi Colours
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು,
ಹಾಗೂ ಹೋಳಿ ಹಬ್ಬದ ಶುಭಾಶಯಗಳು.
ಹೋಳಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಓಕುಳಿ ಹಾಡುವ ಪದ್ಧತಿ ಇದೆ. ಈ ಹಬ್ಬದಲ್ಲಿ ಬಣ್ಣ ಹಚ್ಚುವುದು ವಿಶೇಷತೆ, ಈ ಬಣ್ಣಗಳಿಂದ ನಿಮ್ಮ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಅದಕ್ಕಾಗಿ ಮನೆಯಲ್ಲಿ ಹೋಳಿ ಹಬ್ಬದ ಬಣ್ಣವನ್ನು ತುಂಬಾ ಸುಲಭವಾಗಿ ನೀವೇ ತಯಾರಿಸಿಕೊಳ್ಳಬಹುದು. ಖರ್ಚು ಕಡಿಮೆ ಹಾಗೆ ಆರೋಗ್ಯವಾಗಿ ಚರ್ಮದ ರಕ್ಷಣೆ ಕೂಡ ಆಗುತ್ತೆ .
ಆದಷ್ಟು ತರಕಾರಿ ರಸಗಳಿಂದ ಬಣ್ಣವನ್ನು ತಯಾರಿಸಿಕೊಳ್ಳಿ,. ಅಥವಾ ನಿಮ್ಮ ಮನೆಯಲ್ಲಿ ಫುಡ್ ಕಲರ್ ಇದ್ದರೆ ಅದನ್ನು ಕೂಡ ಬಳಸಿ ಬಣ್ಣವನ್ನು ತಯಾರಿಸಿ.
ಇವೆರಡು ಮಾಡಲು ಸಮಯವಿಲ್ಲದಿದ್ದರೆ ಫ್ಯಾಬ್ರಿಕ್ ಟೆಂಟನ್ನು ಉಪಯೋಗಿಸಿ ಬಣ್ಣವನ್ನು ತಯಾರಿಸಿ. ಆದಷ್ಟು ತರಕಾರಿ ರಸಗಳಿಂದ ತಯಾರಿಸಲು ಪ್ರಯತ್ನಿಸಿ ಯಾವುದೇ ರೀತಿಯ ದುಷ್ಪರಿಣಾಮಗಳು ನಿಮ್ಮ ತ್ವಚೆಯ ಮೇಲೆ ಆಗುವುದಿಲ್ಲ. ಹೋಳಿ ಹಬ್ಬದ ಶುಭಾಶಯಗಳು. ಧನ್ಯವಾದಗಳು.
.
Date Published | 2020-03-03 07:05:13Z |
Likes | 17 |
Views | 556 |
Duration | 0:07:04 |